ಫ್ರಾನ್ಸಿನ ಗಣಿತಶಾಸ್ತ್ರಜ್ಞರಾಗಿದ್ದ ಆಗಸ್ಟಿನ್-ಲೂಯಿ ಕೌಚಿರವರು ೧೭೮೯ರ ಆಗಸ್ಟ್ ೨೧ರಂದು ಪ್ಯಾರಿಸ್ಸಿನಲ್ಲಿ ಜನಿಸಿದರು. ೧೮೪೮ರಲ್ಲಿ ಕೌಚಿಯವರು ಪ್ಯಾರಿಸ್ಸಿನ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರೀಯ ಖಗೋಳವಿಜ್ಞಾನದ ( ) ವಿಭಾಗದಲ್ಲಿ ಪ್ರೊಫೆಸರ್ ಆಗಿ ನೇಮಕಗೊಂಡರು. ಕೌಚಿಯವರು ದೀರ್ಘವೃತ್ತ ಫಲನಗಳ ( ) ಅಸ್ತಿತ್ವವನ್ನು ದೃಢಪಡಿಸಿದರು. ಹಾಗೆಯೇ ಫಲನಗಳ ಸಾಮಾನ್ಯ ಸಿದ್ಧಾಂತಕ್ಕೆ ( ) ಚಾಲನೆ ನೀಡಿದರು ಮತ್ತು ಅನಂತ ಸರಣಿಯ ಪರಿಚ್ಛಿನ್ನತೆಯ ( ) ಆಧುನಿಕತೆಗೆ ತಳಹದಿ ಹಾಕಿದರು. ರೇಖೀಯ ಅವಕಲ ಸಮೀಕರಣದ ಅನುಕಲನದ ( ) ವಿಧಾನವನ್ನು ಕೌಚಿಯವರು ಪರಿಪೂರ್ಣತೆಯ ಹಂತಕ್ಕೆ ತಂದರು. ಶೇಷಗಳ ಕಲನಶಾಸ್ತ್ರವನ್ನು ( ) ಅವರು ಸಂಶೋಧಿಸಿದರು. ಕೌಚಿಯವರು ೧೮೫೭ರ ಮೇ ೨೩ರಂದು ಸಿಯೋಕ್ಸ್‌ನಲ್ಲಿ ನಿಧನರಾದರು. == ಉಲ್ಲೇಖಗಳು ==